ಮತ್ತೆ ಮತ್ತೆ ಪ್ರಯತ್ನಿಸು

ಹಾಲಿವುಡ್ ನಿರ್ಮಾಪಕ ಜಾರ್ಜ್ ಮಿಲ್ಲರ್, 1979ರಲ್ಲಿ ತನ್ನ ಮ್ಯಾಡ್ ಮ್ಯಾಕ್ಸ್ ಚಿತ್ರದ ನಾಯಕ ನಟನಿಗಾಗಿ ಸ್ಕ್ರೀನ್ ಟೆಸ್ಟ್ ಗೆ ಆಹ್ವಾನಿಸಿದ್ದ. ಅದರಲ್ಲಿ ಆಸ್ಟ್ರೇಲಿಯಾದ ನಟ ಮೆಲ್ ಗಿಬ್ಸನ್ ಕೂಡ ಒಬ್ಬ.
ಸ್ಕ್ರೀನ್ ಟೆಸ್ಟ್ ನ ಹಿಂದಿನ ರಾತ್ರಿ ಗಿಬ್ಸನ್ ಬೀದಿಯಲ್ಲಿ ನೆಡೆದುಕೊಂಡು ಬರುತ್ತಿದ್ದಾಗ ಯಾರು ಮೂರು ಜನ ಕುಡುಕರು ಅವನನ್ನು ಅಟ್ಟಿಸಿಕೊಂಡು ಹೊಡೆದಿದ್ದರು. ಮಾರನೆಯ ದಿನ ಸ್ಕ್ರೀನ್ ಟೆಸ್ಟ್ ಹೊತ್ತಿಗೆ ಅವನ ಮುಖ ಹೊಡೆತದಿಂದ ಊದಿಕೊಂಡು ಮುಖ ವಿಕಾರವಾಗಿತ್ತು.
ಇನ್ನು ಸ್ಕ್ರೀನ್ ಟೆಸ್ಟ್ ನಲ್ಲಿ ನಾನು ಪಾಸಾಗುದಿಲ್ಲ. ಹೋಗಿ ಪ್ರಯೋಜನವಿಲ್ಲ. ಎಂದು ಯೋಚಿಸಿದವನು, ಬಳಿಕ ಸ್ವಲ್ಪ ಸಮಯದ ನಂತರ ಹೇಗೂ ಪಾಸಗುದಿಲ್ಲ. ಸ್ಕ್ರೀನ್ ಟೆಸ್ಟ್ ಗೆ ಹೋಗಿ ಬಂದರೇನು? ಎಂದುಕೊಂಡು ಸ್ಕ್ರೀನ್ ಟೆಸ್ಟ್ ಗೆ ಹೋದ.
ಜಾರ್ಜ್ ಮಿಲ್ಲರ್ ತನ್ನ ಚಿತ್ರಕ್ಕೆ ಮುಖದಲ್ಲಿ ಗಾಯವಾಗಿ ವಿಕಾರವಾಗಿರುವವನನ್ನು ಹುಡುಕುತ್ತಿದ್ದ. ಗಿಬ್ಸನ್ ಮುಖದಲ್ಲಿ ಗಾಯವಾಗಿರುದನ್ನು ನೋಡಿ ತನ್ನ ಚಿತ್ರಕ್ಕೆ ಅವನನ್ನೆ ನಾಯಕನ್ನಾಗಿ ಆಯ್ಕೆ ಮಾಡಿದ. ನಂತರ ಆ ಚಿತ್ರ ಶ್ರೇಷ್ಠ ಚಿತ್ರವಾಗಿ ಗಿಬ್ಸನ್ ಗೆ ದೊಡ್ಡ ಹೆಸರು ತಂದು ಕೊಟ್ಟಿತು.
“ನಾಚಿಕೆ, ಭಯ, ಹಿಂಜರಿಕೆಯಿಂದ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸದೆ ಜೀವನದಲ್ಲಿ ಸೋಲುವವರೆ ಹೆಚ್ಚು. ಬಂದ ಅವಕಾಶವನ್ನು ತಪ್ಪಿಸಿಕೊಳ್ಳದೆ, ಒಮ್ಮೆ ಪ್ರಯತ್ನಿಸೋಣ ಎಂದು ಮುನ್ನುಗ್ಗುತ್ತಿದ್ದರೆ ಗೆಲುವು ಸಂಪಾದಿಸಬಹುದು.”

Comments

Popular posts from this blog

Camel story

Keep always Recceiving Good or Bad in Life Journey...